Wednesday, July 11, 2007

ನನ್ನ ತಲೆ ಮೇಲೇ ಚಹಾ ಮಾಡ್ತೀನಿ ಅಂದ ಚುರುಕಿನ ಚೆಲುವೆ ನೀನೇ!

ಹಾಯ್ ವೈಶೂ,
ನೀನು ತುಂಬಾ ಸ್ವಾರ್ಥಿ ಕಣೇ, ನಾನಿರುವಲ್ಲಿಗೇ ಬಂದು ನೀನು ನನ್ನ ಭೇಟಿಯಾಗದೇ, ಯಾವುದೇ ಸುಳಿವನ್ನು ನೀಡದೆ ಹೊರಟು ಹೋದೆಯಲ್ಲಾ. ಯಾಕೆ ಕಣೇ ಆ ಥರಾ ಮಾಡ್ದೆ?
ನನ್ನ ಬಾಳಿನಲ್ಲಿ ಪ್ರೀತಿಯ ಲೇಪವನ್ನು ಬೆಸೆದು, ಆ ಪ್ರೀತಿಯ ಹೂವನ್ನು ಹೊಸಕಿ ಹಾಕುವ ವ್ಯರ್ಥ ಪ್ರಯತ್ನವನ್ನು ಯಾಕೆ ಮಾಡ್ತೀಯ?
ನನಗೊತ್ತು ಕಣೇ ನಿನಗೆ ನನ್ನ ಕಾಡೋದೆಂದರೆ ಒಂಥರಾ ಖುಷಿ. ಅದರಲ್ಲೂ ನನ್ನ ಸಿಟ್ಟು ಏರಲು ಯಾವತ್ತೂ 2 ಬಾರಿ ಫುಲ್ ರಿಂಗ್ ಮಾಡದ ಹೊರತು ನೀನು ಇದುವರೆಗೆ ನಿನ್ನ ಮೊಬೈಲ್ ಫೋನ್ ಎತ್ತಿದ್ದಿದೆಯಾ ನೀನೇ ಹೇಳು.
ಕಾಲೇಜು ದಿನಗಳಲ್ಲಿ ನಿನ್ನ ನಾ ಇಷ್ಟಪಟ್ಟಿದ್ದು ಹೇಗೆ ಗೊತ್ತಾ? ನೀವು ನಮ್ಮ ಜೂನಿಯರ್ ಆಗಿ ಬಂದು ನಿಮ್ಮ ಜತೆ ವಾದ ಮಾಡುವಾಗ ನೀನು ಹೇಳಿದೆಯಲ್ಲಾ ನಾನು ತಲೇ ಮೇಲೆ ಬೇಕಾದರೂ ಟೀ ಮಾಡ್ತೇನೆ, ಬೇಕೂಂದ್ರೆ ಟೀ ಪುಡಿ, ನೀರು, ಸಕ್ಕರೆ ಹಾಲು ತನ್ನಿ ಅಂತ. ಅಂದೇ ಅಂದ್ಕೊಂಡೆ ಹುಡುಗಿ ತುಂಬಾ ಚುರುಕು. ನನಗೆ ಇಷ್ಟವಾದ ಎಲ್ಲಾ ಗುಣಗಳನ್ನು ಬೆಳೆಸಿಕೊಂಡಿದ್ದಾಳೆ ಎಂದು.
ಮತ್ತೆ ಕೆಲವು ದಿನಗಳ ಪರಿಚಯವಾದ ಗೆಳೆತನ ಯಾವತ್ತೋ ಪ್ರೀತಿಗೆ ತಿರುಗಿತ್ತು. ಅದರ ನಂತರ ನಡೆದಿದ್ದು ಪ್ರೀತಿಯ ಇತಿಹಾಸ. ನಾನು ಪದವಿ ಮುಗಿಸಿ ಹೊರಟಾಗ ನಿನ್ನ ಕಣ್ಣ ತುಂಬಾ ಮುಂಗಾರು ಮಳೆ ಥರಾ ಜಲಲ ಅಮೃತಧಾರೆ. ಅವತ್ತೇ ಹೇಳಿದ್ದೆ ಅಷ್ಟು ಅಟ್ಯಾಚ್‌ಮೆಂಟ್ ಇಟ್ಕೋಬೇಡ ಅಂತ. ಆಗ ಪ್ರೀತಿ ಅಮರ ಕಾವ್ಯವನ್ನು ವರ್ಣಿಸಿದ ನಿನ್ನನ್ನು ಮರೆಯಲು ಸಾಧ್ಯವೇ ಪ್ರಿಯೆ.
ಹಾಗೆ ಮೊನ್ನೆ ಏಪ್ರಿಲ್‌ನಲ್ಲಿ ನಿನ್ನ ಕೋರ್ಸ್ ಮುಗಿಸಿ, ಮೇ ಮೊದಲ ವಾರದಲ್ಲಿ ನಿನ್ನ ಕೆಲಸದ ಸಂದರ್ಶನಕ್ಕಾಗಿ ಬೆಂಗಳೂರಿಗೆ ಯಾವುದೇ ಮುನ್ಸೂಚನೆಯಿಲ್ಲದೆ ಬಂದು ವಾಪಸ್ ಹೋಗುತ್ತಿರುವಾಗ ಫೋನ್ ಮಾಡಿದಾಗ ನೀನು ಹೇಳಿದ್ದೇನು. ಅಣ್ಣ ಜತೆಗಿದ್ದ ಅದಕ್ಕೆ ನಂಗೆ ತುಂಬಾ ಭಯ. ಜತೆಗೆ ಎಲ್ಲರತ್ರ ಈ ವಿಷಯ ಹೇಳ್ಕೊಂಡು ಬರೋದಿಕ್ಕೆ ನಂಗೆ ಇಷ್ಟವಿಲ್ಲ ಎಂದಲ್ಲವೇ. ಈ ಗುಣಗಳಿಂದಾಗಿಯೇ ಅಲ್ಲವೇ ನೀನು ನನ್ನ ಹೃದಯದರಸಿಯಾಗಿದ್ದು. ಇಲ್ಲಾಂದ್ರೆ ಇಂದು ನೀನ್ಯಾರೋ ನಾನ್ಯಾರೋ ಆಗಿರ್‍ತಿದ್ವಿ. ಅಲ್ವಾ? ಮುಂದಿನ ವಾರ ಬೆಂಗಳೂರಿಗೆ ಬರ್‍ತಾ ಇದ್ದೀ ಅಲ್ವಾ. ಅದ್ಕೇ ಇರಬೇಕು ಹೃದಯ ಕೂಗುತಿದೆ ಅನಿಸುತಿದೆ ಯಾಕೋ ಇಂದು, ನೀನೇನೇ...... ಉಳಿದದ್ದು ನೀನು ಬಂದ ನಂತರ ಹೇಳ್ತೀನಿ. ಹೆಚ್ಚೆಂದರೆ ಇನ್ನು ೩ ದಿನ ಮತ್ತೆ ನನ್ನ ನಿನ್ನ ಜಂಟಿ ಪಯಣ. ಅದಕ್ಕಿಂತ ಮೊದಲು ನನ್ನ ಮನೆಯಲ್ಲಿ ನಮ್ಮ ಪ್ರೀತಿ ವಿಷಯ ಹೇಳಿ ಅವರನ್ನು ನಿನ್ನ ಮನೆಗೆ ಕಳಿಸಿರ್‍ತೀನಿ. ಅದುವರೆಗೆ ಕಾಯ್ತಾ ಇರು.

ನಿನ್ನೊಲವಿನ,
ದುನಿಯಾದ ಇನಿಯ

4 comments:

Jagali bhaagavata said...

ಈಗ ವೈಶೂ ಹೇಗಿದ್ದಾಳೆ? ಎಲ್ಲಿದ್ದಾಳೆ?

ರಾಧಾಕೃಷ್ಣ ಆನೆಗುಂಡಿ. said...

ಪ್ರೀತಿ ಎಂದರೆ ಹೀಗಯೇನು. ನೋವಾದಗ , ಸಂತೋಷವಾದಗಿನ ವೇದನೆಗಳೇ ಹೀಗೆ.......
ಅಂದ ಹಾಗೆ ತಮ್ಮ ಪರಿಚಯವೇ ಅಪರಿಚಿತವಾಗಿದೆಯಲ್ಲ....

ಅಹರ್ನಿಶಿ said...

ಡಿಯರ್ ಮೇಡ೦/ಸರ್,
ನಿಮ್ಮ ಗಾಯಬ್ ಯಾಕೆ ಅ೦ತ ಕೇಳಬಹುದಾ.
ಕುತೂಹಲಕ್ಕಾ....
ಹೋಗ್ಲಿಬಿಡಿ ನಿಮ್ಮ ಅನಿಸಿಕೆಗೆ ಧನ್ಯವಾದ ಹೆಳೋಣ ಅ೦ತ.
ನಾನೂ ರೀ... ಶ್ರೀಮಾನ್ ಶ್ರೀಸಾಮಾನ್ಯ.
ನಿಮ್ಮ ಬ್ಲಾಗ್ ನೋಡಿದ ಮೇಲೆ ನನ್ನ ತಲೆಯಲ್ಲಿ ಒ೦ದು ಸಮಸ್ಯೆ ಕಾಡ್ತಾ ಇದೆ ಅದು ಏನಪ್ಪಾ ಅ೦ದ್ರೆ ನಾನು ಅಗತ್ಯಕ್ಕಿ೦ತ ಹೆಚ್ಹಾಗಿ ನನ್ನ ಬ್ಲಾಗಿನಲ್ಲಿ Identity ಎಲ್ಲರಿಗು ತೋರಿಸ್ತಾ ಇದಿನಾ ಅ೦ತಾ.ನೀವೇನ೦ತೀರ.

dinesh said...

prema pallava, prema bhavanegalannu ukkisuvanthe mathyavudu ramya bhavanegalannu ukkisodillveno..? dinkkomdu prema patra briiri..